About Us

Your trusted co-operative partner in Yellapur

Who We Are ನಾವು ಯಾರು

Sarvodaya Gramavikasa Souharda Co-operative Society Ltd. is a registered co-operative credit society serving the people of UTTARA KANNADA DISTRICT and surrounding areas. We are committed to promoting the habit of savings and financial discipline among our members.

We offer Savings Accounts, Pigmy Deposits, Fixed Deposits, and Recurring Deposits with competitive interest rates. Our special schemes include accidental insurance of ₹75,000 and life insurance of ₹7,50,000 for members.

Customer trust and trustworthy service is our pride. Visit our office to become part of our co-operative family and enjoy reliable financial services close to home.

Sarvodaya Co-operative Society services pamphlet

Message from the Chairman ಅಧ್ಯಕ್ಷರ ಸಂದೇಶ

ನಮ್ಮ ಭಾಗದ ಎಲ್ಲಾ ಗೌರವಾನ್ವಿತ ಸಾರ್ವಜನಿಕ ಬಂಧುಗಳೇ ಹಾಗೂ ಹಿತೈಷಿಗಳೇ, ಎಲ್ಲರಿಗೂ ನನ್ನ ನಮಸ್ಕಾರಗಳು.

ಇಂದು ನಮ್ಮೆಲ್ಲರ ಪಾಲಿಗೆ ಅತ್ಯಂತ ಸಂತೋಷದ ದಿನ. ನಮ್ಮ ಭಾಗದ ಜನರ ಆರ್ಥಿಕ ಅಭಿವೃದ್ಧಿ, ಪರಸ್ಪರ ಸಹಕಾರ ಮತ್ತು ಸ್ವಾವಲಂಬನೆಗಾಗಿ ನಾವು ಸರ್ವೋದಯ ಗ್ರಾಮವಿಕಾಸ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಎಂಬ ಸೊಸೈಟಿಯನ್ನು ಹೆಮ್ಮೆಯಿಂದ ಪ್ರಾರಂಭಿಸುತ್ತಿದ್ದೇವೆ.

ಬಹಳಷ್ಟು ಜನರಿಗೆ ಅನಿಸಬಹುದು—ಈಗಾಗಲೇ ಮಾರುಕಟ್ಟೆಯಲ್ಲಿ ಇಷ್ಟೊಂದು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಇರುವಾಗ ಈ ಸೊಸೈಟಿಯ ಅಗತ್ಯವೇನಿದೆ? ಎಂದು. ನೆನಪಿರಲಿ, ಬ್ಯಾಂಕುಗಳು ಕೇವಲ ವ್ಯವಹಾರ ಮತ್ತು ಲಾಭಕ್ಕಾಗಿ ಕೆಲಸ ಮಾಡುತ್ತವೆ. ಆದರೆ, ನಮ್ಮ ಈ ಸಹಕಾರ ಸಂಘದ ಮುಖ್ಯ ಉದ್ದೇಶ ಲಾಭ ಗಳಿಸುವುದಲ್ಲ, ಬದಲಿಗೆ ನಮ್ಮ ಜನರ ಏಳಿಗೆ.

ಒಬ್ಬಂಟಿಯಾಗಿ ಸಾಧಿಸಲಾಗದ್ದನ್ನು, ನಾವೆಲ್ಲರೂ ಒಟ್ಟಾಗಿ ಸಾಧಿಸಬಹುದು.

ಇದು ಯಾರೋ ಒಬ್ಬರಿಗೆ ಸೇರಿದ ಸಂಸ್ಥೆಯಲ್ಲ; ಇದು ನಿಮ್ಮ ಸಂಸ್ಥೆ, ನಮ್ಮ ಸಂಸ್ಥೆ. ಇಲ್ಲಿ ಪ್ರತಿಯೊಬ್ಬ ಸದಸ್ಯನೂ ಈ ಸೊಸೈಟಿಯ ಮಾಲೀಕನೇ ಆಗಿರುತ್ತಾನೆ. ನಿಮ್ಮ ಕಷ್ಟದ ಸಮಯದಲ್ಲಿ ಸುಲಭವಾಗಿ ಸಾಲ ಸೌಲಭ್ಯ ನೀಡುವುದು, ನಿಮ್ಮ ಸಣ್ಣ ಉಳಿತಾಯಕ್ಕೂ ಸೂಕ್ತ ಭದ್ರತೆ ಮತ್ತು ಉತ್ತಮ ಬಡ್ಡಿ ನೀಡುವುದು ಹಾಗೂ ನಮ್ಮ ಭಾಗದ ಸಣ್ಣ ಉದ್ಯಮಿಗಳು, ರೈತರು, ಮಹಿಳೆಯರು ಮತ್ತು ಯುವಕರಿಗೆ ಆರ್ಥಿಕ ಶಕ್ತಿ ತುಂಬುವುದು ನಮ್ಮ ಮುಖ್ಯ ಗುರಿಯಾಗಿದೆ.

ನಾವು ನಿಮಗೆ ನೀಡುವ ಭರವಸೆಗಳು:

  • ಪಾರದರ್ಶಕತೆ: ನಿಮ್ಮ ಪ್ರತಿಯೊಂದು ರೂಪಾಯಿಗೂ ಇಲ್ಲಿ ಸಂಪೂರ್ಣ ಸುರಕ್ಷತೆ ಮತ್ತು ಪಾರದರ್ಶಕತೆ ಇರುತ್ತದೆ.
  • ಸರಳತೆ: ಯಾವುದೇ ಕಠಿಣ ನಿಯಮಗಳಿಲ್ಲದೆ, ನಮ್ಮದೇ ಜನರೊಂದಿಗೆ ಮುಕ್ತವಾಗಿ ವ್ಯವಹರಿಸುವ ವಾತಾವರಣ ಇಲ್ಲಿದೆ.
  • ಸ್ಥಳೀಯ ಅಭಿವೃದ್ಧಿ: ಇಲ್ಲಿ ಸಂಗ್ರಹವಾಗುವ ಹಣ ನಮ್ಮದೇ ಜನರ, ನಮ್ಮದೇ ಊರಿನ ಪ್ರಗತಿಗೆ ಬಳಕೆಯಾಗುತ್ತದೆ.

ಕೈ ಜೋಡಿಸಿ, ಜೊತೆಯಾಗಿ ಬೆಳೆಯೋಣ. ನೀವೆಲ್ಲರೂ ಈ ನಮ್ಮ ಹೊಸ ಸಹಕಾರ ಸಂಘದ ಸದಸ್ಯರಾಗುವ ಮೂಲಕ ಇದರ ಸೌಲಭ್ಯಗಳನ್ನು ಪಡೆದುಕೊಂಡು, ಸಂಸ್ಥೆಯನ್ನು ಬೆಳೆಸಬೇಕಾಗಿ ನಿಮ್ಮಲ್ಲಿವಿನಂತಿಸಿಕೊಳ್ಳುತ್ತೇನೆ. ನಿಮ್ಮ ನಂಬಿಕೆಯೇ ನಮ್ಮ ಯಶಸ್ಸಿನ ಹೆಜ್ಜೆ.

ನಿಮ್ಮ ಉಳಿತಾಯಕ್ಕೆ ಹೆಮ್ಮೆಯ ಭದ್ರತೆ, ನಿಮ್ಮ ಪ್ರಗತಿಗೆ ಸಹಕಾರದ ಹಸ್ತ. ನಮ್ಮ ಹೊಸ ಸೊಸೈಟಿಗೆ ನಿಮಗೆ ಆದರದ ಸ್ವಾಗತ!

ನಂಬಿಕೆಯೇ ನಮ್ಮ ಬಲ: ಖಾಸಗಿ ಸಂಸ್ಥೆಗಳ ವ್ಯಾಮೋಹ ಬೇಡ, ನಮ್ಮದೇ ಜನರ ಸಹಕಾರ ಸಂಘ ನಮ್ಮ ಹೆಮ್ಮೆಯಾಗಲಿ. ಇಂದೇ ಸದಸ್ಯರಾಗಿ.

ಒಗ್ಗಟ್ಟಿನ ಮಂತ್ರ: ಸಣ್ಣ ಉಳಿತಾಯ, ದೊಡ್ಡ ಭವಿಷ್ಯ. ಬನ್ನಿ, ಕೈ ಜೋಡಿಸಿ...

ಧನ್ಯವಾದವುಗಳೊಂದಿಗೆ

ಗೌರವ ಅಧ್ಯಕ್ಷರು
ಘನಶ್ಯಾಮ ಎನ್ ಜೋಶಿ 🙏

This scheme is only with us — visit our office to get the benefits ಈ ಯೋಜನೆ ಕೇವಲ ನಮ್ಮಲ್ಲಿದೆ... ಈ ಯೋಜನೆಯ ಲಾಭ ಪಡೆಯಲು ನಮ್ಮ ಕಚೇರಿಗೆ ಭೇಟಿ ನೀಡಿ...

Our Location ನಮ್ಮ ವಿಳಾಸ

Sri Krupa Building, K.B. Road, Yellapur-581359

ಶ್ರೀಕೃಪಾ ಬಿಲ್ಡಿಂಗ್, ಕೆ.ಬಿ .ರಸ್ತೆ, ಯಲ್ಲಾಪುರ-581359